
ಬೆಳ್ಳಾರೆ ಸಮೀಪದ ಐವರ್ನಾಡು ನಾಟಿಕೇರಿ ಫ್ಯಾಮಿಲಿಯಿಂದ ಸಾರ್ವಜನಿಕರಿಗೆ ಕೋಟಿಗಟ್ಟಲೆ ವಂಚನೆ ನಡೆದಿದೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವಂಚನೆ ಯಾಕೆ? ಹೇಗೆ? ಎಂಬ ಡೀಟೈಲ್ಸ್ ಇನ್ನೂ ಹೊರಗೆ ಬಿದ್ದಿಲ್ಲ. ಪೋಲಿಸ್ ಕಂಪ್ಲೈಂಟ್ ಆಗಿದೆಯಂತೆ ಮಂಗಳೂರಲ್ಲಿ.
ಹಾಗೆಂದು ವಂಚನೆ ಕೇಸುಗಳು, ಪದ್ರಾಡ್ ಕೇಸುಗಳು, ಮುರ್ಕಿಸ್ ಕೇಸುಗಳು ದಿನೇ ದಿನೇ ಹೆಚ್ಚುತ್ತಿದ್ದು ಜನ ಬುದ್ಯಂತರಾದಷ್ಟು ಜಾಸ್ತಿ ಜಾಸ್ತಿ ವಂಚನೆಗಳು ನಡೆಯುತ್ತಿದೆ. ಕೊಟ್ಟವನು ಕೋಡಂಗಿ, ಇಸ್ಕೊಂಡವನು ಈರಭದ್ರ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ನಿಜವಾಗುತ್ತಿದೆ. ಓ ಮೊನ್ನೆಯಷ್ಟೇ ಬೆಳ್ಳಾರೆಯಲ್ಲಿ ಆನ್ ಲೈನ್ ಗೇಮಿಂಗ್ ನಡೆದು ಕೋಟಿ ಕೋಟಿಯಲ್ಲಿ ಮುಳುಗಿ ಜನ ಕೋತಿಗಳಾಗಿದ್ದರು. ಇದೀಗ ಐವರ್ನಾಡು ನಾಟಿಕೇರಿ ಫ್ಯಾಮಿಲಿಗೆ ಸೇರಿದ ಬುದ್ಧಿವಂತ ಇಂಜಿನಿಯರ್ ಒಬ್ಬ ಆನ್ ಲೈನ್ ಹುಚ್ಚಿಗೆ ಬಲಿಯಾಗಿ ತನ್ನದೆಲ್ಲವನ್ನೂ ಕಳಕೊಂಡು, ಊರಿಡೀ ಸಾಲ ಮಾಡಿ ಊರು ಬಿಟ್ಟಿರುವ ಸುದ್ದಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯುವ ಜನತೆಗೆ ಬುದ್ಧಿಯೇ ಬರುತ್ತಿಲ್ಲ.
ಇವರು ಜಯಪ್ರಸಾದ್ ನಾಟಿಕೇರಿ. ಒಳ್ಳೇ ಫ್ಯಾಮಿಲಿಯಿಂದ ಬಂದವರು ಮತ್ತು ಸುಸಂಸ್ಕೃತರಾಗಿದ್ದವರು. ಎಲ್ಲಾ ಭಟ್ರುಗಳ ಹಾಗೆ ತೋಟ, ಅಡಿಕೆ,ಡೈರಿ, ತೆಂಗು, ಕಂಗು ಅಂತ ಕಿಂಗ್ ಆಗಿದ್ದವರು. ಇವರ ಮಗ ಅರ್ವಿಂದ್ ನಾಟಿಕೇರಿ. ಮತ್ತೇ ಎಲ್ಲಾ ಭಟ್ರುಗಳ ಹಾಗೆ ಜಯಪ್ರಸಾದ್ ಭಟ್ರೂ ಮಗನನ್ನು ಇಂಜಿನಿಯರ್ ಓದಿಸಿದ್ದರು. ಅರ್ವಿಂದ್ ಭಲೇ ಮಲ್ಲಯ್ಯ ಬುದ್ಯಂತ, ಹಂಡ್ರೆಡ್ ಜಿಬಿ ಮೆಮೋರಿ ಹೊಂದಿದಾತ. ಆದರೆ ಎಲ್ಲಾ ಬಣ್ಣ ಮಜಿ ನುಂಗಿತು ಎಂಬಂತೆ ಅರ್ವಿಂದ್ ಲ್ಯಾಪ್ ಬಿಡಿಸಿ ಕುಂತವನು ಆನ್ ಲೈನ್ ಗೇಮುಗಳ ಪ್ರೇಮದಾಸ, ದೇವದಾಸನಾಗಿ ಕೊನೆಗೆ ದೆವ್ವದಾಸನಾಗುವಲ್ಲಿ ತನಕ ಮುಂದುವರಿದು ಬಿಟ್ಟ. ನಿರಂತರ ಆನ್ ಲೈನ್ ಟ್ರೇಡಿಂಗ್, ಗೇಮ್ಸ್ ಗಳಲ್ಲಿ ಆಡಿದ ಅರ್ವಿಂದ್ ಮೊದಮೊದಲು ತನ್ನ ಪಾಕೆಟ್ ಮನಿ ಕಳ್ಳಕ್ಕೊಂಡ. ಕಳಕ್ಕೊಂಡ ಪಾಕೆಟ್ ಮನಿಯನ್ನು ವಾಪಾಸ್ ಗಳಿಸಿಯೇ ಸಿದ್ಧ ಅಂತ ಮತ್ತೇ ಆಡಿದ. ಪಾಕೆಟ್ ಮನಿ ಜೊತೆ ಸಂಬಳ ಹೋಯ್ತು. ಸಂಬಳದ ಮೇಲೆ ಸಾಲ ಮಾಡಿದ್ದು ಹೋಯ್ತು. ತಾಯಿ ಜೊತೆ ಕಡ ತಗೊಂಡು ಹಾಕಿದ್ದು ಬುರ್ರನೆ ಹೋಯ್ತು, ತಂದೆ ಕೊಟ್ಟಿದ್ದು ಸುರ್ರನೆ ಹೋಯ್ತು, ಕಸಿನ್ಸ್ ಬ್ರದರ್ಸ್, ಸಿಸ್ಟರ್ಸ್ ಕೊಟ್ಟಿದ್ದು ಚುಂಯ್ಕ ಆಯ್ತು, ನೆರೆಕರೆ, ಕುಟುಂಬ, ಬಂಧುಬಳಗದ್ದೂ ಮುಗಿಯಿತು. ಚೆಕ್ ಕೊಟ್ಟು ಸಾಲ, ಭೂಮಿ ಮೇಲೆ ಸಾಲ, ಸೊಸೈಟಿ ಕ್ರಾಪ್ ಲೋನು,ತ್ರೀ ಪರ್ಸೆಂಟ್, ಓನ್ ಫಂಡೂ ಮುಗಿಯಿತು. ಇವತ್ತಲ್ಲ ನಾಳೆ ದುಡ್ಡು ಮೆರವಣಿಗೆಯಲ್ಲಿ ಬರುತ್ತದೆ, ಐವರ್ನಾಡು ಮುಳುಗಿ ಹೋಗುವಷ್ಟು ದುಡ್ಡಿನ ಹೊಳೆ ಹರಿದು ಬಿಡುತ್ತದೆ ಎಂಬ ನಂಬಿಕೆ ಅರವಿಂದನಿಗೆ. ಆದ್ರೆ ದುಡ್ಡು ಎಲ್ಲಿ ಬರುತ್ತದೆ? ದುಡ್ಡು ಗುಳ್ಳಿಗ್ಗನ ಡಬ್ಬಿಗೆ ಬಿದ್ದ ಹಾಗೆ ಬಿದ್ದಿದ್ದು ಬಿಟ್ಟರೆ ಹೋದ ದುಡ್ಡಿನ ಸುದ್ದಿಯೇ ಬರಲಿಲ್ಲ. ಸಾಲಗಾರರು ಒಂದು ದಿನ ಕಾದರು, ವಾರ ಕಾದರು, ತಿಂಗಳುಗಟ್ಟಲೆ ಕಾದರು, ವಾರ್ಷಿಕ ಮುಗಿಯಿತು, ಕೆಲೆಂಡರಿನ ಎಲ್ಲಾ ಡೇಟಿಗೂ ರೌಂಡು ಹಾಕಿ ಆಯ್ತು. ಆದರೆ ಅರವಿಂದನ ದುಡ್ಡು ಬರಲೇ ಇಲ್ಲ. ಸಾಲಗಾರರು ಚೆಕ್ ಬೌನ್ಸ್ ಕೇಸ್ ಹಾಕಿ ಬಿಟ್ಟರು. ಅರವಿಂದ ಕೋಮಣ ತಪ್ಪಿಸಿ ಬಿಟ್ಟ.

ಇದೀಗ ಜಯಪ್ರಸಾದ್ ಫ್ಯಾಮಿಲಿ ಎಬ್ಸ್ಕಾಂಡಿಂಗ್ ಆಗಿದೆ ಎಂದು ತಿಳಿದುಬಂದಿದೆ. ತೆರೆಮರೆಯಲ್ಲಿ ನಿಂತು ತಮ್ಮ ನಾಟಿಕೇರಿ ಜಾಗವನ್ನು ಸೇಲ್ ಮಾಡಲು ಯತ್ನಿಸುತ್ತಿದ್ದು ಇಂಜಿನಿಯರ್ ಮಗನ ಮೇಲೆ ಇಟ್ಟಿದ್ದ ನಂಬಿಕೆಗೆ ದಂಡ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅರ್ವಿಂದ್ ಕೋಟಿಗಟ್ಟಲೆ ಮುರ್ಕಿಸ್ ಮಾಡಿ ಮುರ್ಕಿದ್ದು ಇನ್ನು ಎಲ್ಲಿ, ಹೇಗೆ ಏಳ್ತಾನೆ ಅನ್ನುವುದೇ ಪ್ರಶ್ನೆಯಾಗಿದೆ. ಇಷ್ಟಾದರೂ ಯುವ ಜನತೆಗೆ ಇನ್ನೂ ಬುದ್ಧಿ ಎಂಬುದು ಬರದಿದ್ದು ಪರಮಾತ್ಮ ಮೆಮೊರಿ ಚಿಪ್ಪು ಹಂಡ್ರೆಡ್ ಜಿಬಿ, ಟೂ ಹಂಡ್ರೆಡ್ ಜಿಬಿ ಕೊಟ್ಟರೂ ಹ್ಯಾಂಗ್ ಆಗುವಲ್ಲಿ ತನಕ ಪರಿಸ್ಥಿತಿ ತಂದು ಬಿಡುತ್ತಾನೆ.