
ಮೊನ್ನೆ ಕಡಬ ಪೋಲಿಸ್ ಸರಹದ್ದಿನ ನೂಜಿಬಾಳ್ತಿಲ ಗ್ರಾಮದಿಂದ ಮಿಸ್ಸಿಂಗ್ ಆಗಿದ್ದ ಮಿಸ್ ಆರ್ಫೈನ್ ಮಹ್ತಾಬ್ ಸೇಫಾಗಿ ಶಿವಮೊಗ್ಗದ ತವರಿನಲ್ಲಿ ಲ್ಯಾಂಡ್ ಆಗಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು ಕಡಬಕ್ಕೆ ತರಬೇಕಷ್ಟೆ!
ಅಲ್ಲಿ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನೀರಾರಿ ಮನೆ ಆಶಿಕ್ ಎನ್ನುವವರ ಪತ್ನಿ ಆರ್ಫೈನ್ ಮಹ್ತಾಬ್ 7/6/26 ರಂದು ಕಾಣೆಯಾಗಿದ್ದು ತವರಿಗೂ ಹೋಗದೆ, ಸಂಬಂಧಿಕರ ಮನೆಗೂ ಹೋಗದೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದ್ದಳು. ಈ ಬಗ್ಗೆ ಗಂಡ ಆಶಿಕ್ ಕಡಬ ಪೋಲಿಸರಿಗೆ ಕಂಪ್ಲೈಂಟ್ ಕೊಟ್ಟಿದ್ದು ಪೋಲಿಸರು ಪ್ರಕಟನೆ ಪ್ರಕಟಿಸಿದ್ದರು. ಇದೀಗ ಮಹ್ತಾಬ್ ತವರಿನಲ್ಲಿ ಪ್ರತ್ಯಕ್ಷಳಾಗಿದ್ದಾಳೆ ಎಂದು ತಿಳಿದುಬಂದಿದೆ. ಎಲ್ಲಿ ಹೋಗಿದ್ದಾಳೆ, ಏನು ಮಾಡಿದ್ದಾಳೆ, ಏಕೆ ಹೋಗಿದ್ದಾಳೆ ಎಂದು ಇನ್ನು ಗೊತ್ತಾಗಬೇಕಾಗಿದೆ. ಹಾಗೆಂದು ಈ ಆಶಿಕ್ ಗೆ ಮಹ್ತಾಬ್ ಜೊತೆ ಮದುವೆ ಆದದ್ದೇ ಕಳೆದ ಮೇನಲ್ಲಿ. ಶಿವಮೊಗ್ಗದ ಫಯಾಜ್ ಹಮೀದ್ ಎನ್ನುವವರ ಮಗಳು ಮಹ್ತಾಬ್ ಜೊತೆ ಕಳೆದ ಮೇ31 ರಂದು ಶಿವಮೊಗ್ಗದಲ್ಲೇ ಮದುವೆ ನಡೆದಿತ್ತು. ನಂತರ ಜೂನ್ ಎರಡಕ್ಕೆ ಕಲ್ಲುಗುಡ್ಡೆಯಲ್ಲಿ ಡಿನ್ನರ್. ಡಿನ್ನರ್ ಮುಗಿಸಿ ಫಯಾಜ್ ಹಮೀದ್ ತನ್ನ ಅಳಿಯ ಮತ್ತು ಮಗಳನ್ನು ಶಿವಮೊಗ್ಗಕ್ಕೆ ಕರಕ್ಕೊಂಡು ಹೋಗಿದ್ದರು. ನಂತರ ಆಶಿಕ್ ಶಿವಮೊಗ್ಗದಿಂದ ಮರಳಿದ್ದು ಜೂನ್ ಐದಕ್ಕೆ ಫಯಾಜ್ ಬಾಯ್ ಮಗಳನ್ನು ನೂಜಿಬಾಳ್ತಿಲದ ಆಶಿಕ್ ಮನೆಗೆ ಕರಕ್ಕೊಂಡು ಬಂದಿದ್ದರು.

ಹಾಗೆ ಜೂನ್ ಆರನೇ ತಾರೀಕು ನೈಟ್ ಎಲ್ಲರೂ ಊಟ ಮಾಡಿ ಮಲಗಿದ್ದು ಹನ್ನೆರಡು ಗಂಟೆ ಸುಮಾರಿಗೆ ಆಶಿಕ್ ಗೆ ಎಚ್ಚರವಾದಾಗ ಮೆಹ್ತಾಬ್ ಗಾಢ ನಿದ್ರೆಯಲ್ಲಿ ಇದ್ದಿದ್ದು ಆಶಿಕ್ ಕೂಡ ಮಲಗಿಕೊಂಡಿದ್ದಾರೆ. ನಂತರ ಏಳನೇ ತಾರೀಖು ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಆಶಿಕ್ ಮೊಬೈಲ್ ಅಲಾರಾಂ ಮಾಡಿದ್ದು ಎದ್ದು ನೋಡಲಾಗಿ ಮಹ್ತಾಬ್ ಕಾಣೆ. ಆಶಿಕ್ ನಂತರ ಇಡೀ ಮನೆಯವರನ್ನು ಎಬ್ಬಿಸಿ ಹುಡುಕಾಡಿದರೂ, ನೆರೆ ಹೊರೆ ಸಂಬಂಧಿಕರ ಮನೆ ಮನೆ ಹುಡುಕಾಡಿದರೂ ಹುಡುಗಿ ನಾಪತ್ತೆ. ಆಶಿಕ್ ಮೊಬೈಲ್ ನಲ್ಲಿ ಅಲಾರಾಂ ಸೆಟ್ ಮಾಡಿ ಮಹ್ತಾಬ್ ಮದುವೆಗೆ ಹಾಕಿದ್ದ ಬಂಗಾರದ ಸಮೇತ ಕಾಣೆಯಾಗಿದ್ದಳು. ನಂತರ ಹುಡುಕಿ, ಹುಡುಕಿ, ಅವಳ ತವರಿಗೂ ವಿಷಯ ಆಶಿಕ್ ಸೀದಾ ಬಂದಿದ್ದು ಕಡಬ ಪೋಲಿಸ್ ಠಾಣೆಗೆ. ಅಲ್ಲಿ ಕಂಪ್ಲೈಂಟ್ ಕೊಡಲಾಗಿ ಪೋಲಿಸರು ಮಹ್ತಾಬ್ ಫೋಟೋ ಪ್ರಕಟಿಸಿದ ಪ್ರಕಟನೆ ಹೊರಡಿಸಿದ್ದರು. ಈಗ ನೋಡಿದ್ರೆ ಮಹ್ತಾಬ್ ಶಿವಮೊಗ್ಗದ ತವರಿನಲ್ಲಿ ಬಂದು ಲ್ಯಾಂಡ್ ಆಗಿದ್ದಾಳೆ ಎಂಬ ಗುಡ್ ನ್ಯೂಸ್ ಬಂದಿದೆ. ಕಡಬಕ್ಕೆ ಇನ್ನು ಬರಬೇಕಷ್ಟೆ ಫೈಲ್ ಕ್ಲೋಸ್ ಮಾಡಲು.

ವಿಷಾದಿಸುತ್ತೇನೆ
ಐವರ್ನಾಡು ಸಮೀಪದ ನಾಟಿಕೇರಿ ಅರವಿಂದ್ ವಂಚನೆ ಪ್ರಕರಣದ ಬಗ್ಗೆ ವರದಿ ಪ್ರಕಟಿಸಿದಾಗ ಅದರಲ್ಲಿ ನಾಟಿಕೇರಿ ಫ್ಯಾಮಿಲಿಯಿಂದ ಸಾರ್ವಜನಿಕರಿಗೆ ಕೋಟಿಗಟ್ಟಲೆ ಹಣ ವಂಚನೆ ಎಂದು ಬರೆಯಲಾಗಿತ್ತು. ನನ್ನ ವಿವೇಚನೆಯಲ್ಲಿ ನಾಟಿಕೇರಿ ಎಂಬುದು ಅರವಿಂದ್ ಫ್ಯಾಮಿಲಿಗೆ ಮಾತ್ರ ಸಂಬಂಧ ಪಟ್ಟಿದ್ದು ಎಂದು ತಿಳಿದಿದ್ದು, ನಾಟಿಕೇರಿಯಲ್ಲಿ ಇನ್ನೂ ಹತ್ತರಷ್ಟು ಅರವಿಂದ್ ಸಂಬಂಧಿಕರ ಮನೆಗಳಿವೆ ಎಂಬ ಬಗ್ಗೆ ತಿಳಿದಿರಲಿಲ್ಲ. ನಮ್ಮ ವರದಿಯಿಂದ ನಾಟಿಕೇರಿಯ ಉಳಿದ ಹತ್ತು ಮನೆಗಳವರಿಗೂ ಮಾನಸಿಕವಾಗಿ ಕಿರುಕುಳವಾದ ಬಗ್ಗೆ ನಮಗೆ ಮಾಹಿತಿ ಬಂದಿದ್ದು ಗೊತ್ತಿಲ್ಲದೆ ಆದ ಈ ಪ್ರಮಾದಕ್ಕೆ ನಾಟಿಕೇರಿ ಫ್ಯಾಮಿಲಿಯ ಪ್ರತೀ ಸದಸ್ಯನ ಕ್ಷಮೆ ಕೋರುತ್ತಿದ್ದೇನೆ.

ಈ ನಾಟಿಕೇರಿ ಫ್ಯಾಮಿಲಿ ಎಂಬ ಹೆಸರನ್ನು ನಾವು ಯಾವುದೇ ಪೂರ್ವದ್ವೇಷದಿಂದಾಗಲಿ, ಫ್ಯಾಮಿಲಿಯೊಂದರ ಮಾನ ಹಾನಿ ಮಾಡುವ ಉದ್ದೇಶದಿಂದಾಗಲಿ ಅಥವಾ ನಮ್ಮ ಡಾಲರ್ ಹೆಚ್ಚು ಮಾಡಿಕೊಳ್ಳಲಾಗಲಿ ಉಪಯೋಗಿಸಿಕೊಂಡದ್ದಲ್ಲ. ಬದಲಾಗಿ ನಾಟಿಕೇರಿ ಫ್ಯಾಮಿಲಿ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಪ್ರಕಟಿಸಿರುವುದಾಗಿದೆ. ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆ.
