ಸುಳ್ಯ ತಾಲೂಕಿನ ದುಗಲಡ್ಕ ಸಮೀಪದ ಕಂದಡ್ಕ ಎಂಬಲ್ಲಿ ನವೀನ್ ಫೆರಾವೋ ಎಂಬವರು ತನ್ನ ಸ್ವಂತ ಮನೆಯ 40 ಅಡಿಯ ಬಾವಿಯೊಳಗೆ ಆಮ್ಲಜನಕದ ಕೊರತೆಯಿಂದ ಉಸಿಲರಾಟದ ಸಮಸ್ಯೆಗೆ ಒಳಗಾಗಿ ಸಂಕಷ್ಟಕ್ಕಿಡಾದ ಘಟನೆ ನಡೆದಿದೆ. ಮುಂಗಾರು ಮಳೆ ಜೋರಾಗುವ ಮುನ್ನ ಒಮ್ಮೆ ಬಾವಿ ಕ್ಲೀನ್ ಮಾಡಿ ಬಿಡುವೆ ಎಂದು ನವೀನ್ ತನ್ನ ಮನೆಯ ಬಾವಿಗೆ ಹಗ್ಗದ ಸಹಾಯದಿಂದ ಇಳಿಯುತ್ತಾ, ಇಳಿಯುತ್ತಾ ,ಕೆಳಗಿಳಿಯುತ್ತಾ ತುಂಬಾ ಕೆಳಗೆ ಹೋಗುತ್ತಾರೆ. ಇನ್ನೇನು ಲ್ಯಾಂಡಿಂಗ್ ಆಗಲು ಕೊನೆಯ ಎರಡು ರಿಂಗ್ ಬಾಕಿ ಇರುವಾಗಲೇ ಆಮ್ಲಜನಕದ ಕೊರತೆ ಶುರುವಾಗಿದೆ. ನವೀನ್ ರಿಗೆ ಸೀರಿಯಸ್ ನೆಸ್ ಗೊತ್ತಾಗಿ ವಾಪಾಸ್ ಮೇಲೆ ಬರಲು ಪ್ರಯತ್ನಿಸುತ್ತಾರೆ. ಆದರೆ ಅಷ್ಟರಲ್ಲಾಗಲೇ ಆಮ್ಲಜನಕದ ಕೊರತೆ ಜಾಸ್ತಿಯಾಗಿ ಅವರು ಕುಸಿದು ಬೀಳುತ್ತಾರೆ. ತಕ್ಷಣವೇ ಮೇಲಿದ್ದ ಮೌರಿಸ್ ಡಿಸೋಜಾ ಹಾಗೂ ನವೀನ್ ಮಾವ ಮಾರ್ಕ್ ಎಂಬವರು ನವೀನ್ ಪತ್ನಿಯಾದ ರೂತ್ ಮೇರಿ ಅವರಿಗೆ ತಿಳಿಸುತ್ತಾರೆ.

ಆ ಕೂಡಲೇ ರೂತ್ ಮೇರಿ ಅವರು ಓಡೋಡಿ ಬಂದು ನೆರೆಕರೆ ಯವರಿಗೆ ಮಾಹಿತಿ ನೀಡುತ್ತಾರೆ ಮತ್ತು ಬೇಗನೆ ಸಮಯಪ್ರಜ್ಞೆಯಿಂದ ಅಗ್ನಿಶಾಮಕ ದಳದವರಿಗೆ ಮತ್ತು ತಾಲೂಕ್ ಆಸ್ಪತ್ರೆಯ ಸಿಬ್ಬಂದಿಯಾದ ಲೀಲಾಧರರಿಗೆ ಕರೆ ಮಾಡಿ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲು ತಿಳಿಸುತ್ತಾರೆ. ಸ್ಪಾಟಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ತೊಂಭತ್ತರಲ್ಲಿ ಬಂದು ಕಾರ್ಯಪ್ರವೃತ್ತರಾಗಿ ಕುಸಿದು ಬಿದ್ದಿದ್ದ ನವೀನರನ್ನು ಮೇಲಕ್ಕೆ ಎತ್ತುತ್ತಾರೆ. ನಂತರ ರೂತ್ ಮೇರಿ ಅವರು ತನ್ನ ಗಂಡನ ಸ್ಥಿತಿ ನೋಡಿ ಧೈರ್ಯಗೆಡದೆ ಪ್ರಥಮ ಚಿಕಿತ್ಸೆಯ ಫಲವಾಗಿ ಸಿಪಿಆರ್ ಅನ್ನು ಕೊಡುತ್ತಾರೆ. ಸಿಪಿಆರ್ ಕೊಟ್ಟ ತಕ್ಷಣವೇ ನವೀನರು ಉಸಿರಾಡಲು ಪ್ರಾರಂಭಿಸುತ್ತಾರೆ. ನಂತರ ಸ್ಥಳಕ್ಕೆ ಆಗಮಿಸಿದ್ದ ಶಿವ ಆಂಬುಲೆನ್ಸ್ ರವರು ಕೂಡಲೇ ತಾಲೂಕು ಸರ್ಕಾರಿ ಆಸ್ಪತ್ರೆ ಸುಳ್ಯ ಇಲ್ಲಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಈ ಮೊದಲೇ ರೂತ್ ಮೇರಿಯವರು ಆಸ್ಪತ್ರೆ ಸಿಬ್ಬಂದಿಯಾದ ಪ್ರೇಮಾವತಿ ಸಿಸ್ಟರ್ ರವರಿಗೆ ಕರೆ ಮಾಡಿ ವಿಷಯದ ಗಂಭೀರತೆಯನ್ನು ತಿಳಿಸಿದ್ದ ಕಾರಣದಿಂದ ಪ್ರಥಮ ಚಿಕಿತ್ಸೆ,ಸ್ಪೀಡ್ ಚಿಕಿತ್ಸೆ ಸಿಕ್ಕಿದ ಕಾರಣ ನವೀನ್ ಚೇತರಿಸಿಕೊಂಡಿದ್ದಾರೆ. ಸ್ಥಳಕ್ಕೆ ಸುಳ್ಯ ಪೊಲೀಸ್ ಸಿಬ್ಬಂದಿಯವರು ಕೂಡ ಬಂದಿದ್ದಾರೆ. ರೂತ್ ಮೇರಿ ಅವರು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುವ ಕಾರಣದಿಂದ ಅಪಗಪಗ ಟ್ರೀಟ್ ಮೆಂಟ್ ಕೊಟ್ಟು ನವೀನ್ ರನ್ನು ಬಚಾವ್ ಮಾಡಲಾಗಿದೆ ಇವರ ಈ ಧೈರ್ಯಕ್ಕೆ ಹಾಗೂ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಕರೆ ಮಾಡಿದ ತಕ್ಷಣವೇ ಕೂಡಲೇ ಕಾರ್ಯಪ್ರವೃತ್ತರಾಗಿ ಓಡಿ ಬಂದ ಅಗ್ನಿಶಾಮಕ ದಳದ ಎಲ್ಲಾ ಸಿಬ್ಬಂದಿಗಳಿಗೂ, ಅಂಬುಲೆನ್ಸ್ ಚಾಲಕ ಮಾಲಕ ಸಂಘ ದವರಿಗೂ, ಪೊಲೀಸ್ ಸಿಬ್ಬಂದಿಯವರಿಗೂ, ಸುಳ್ಯ ತಾಲೂಕ್ ಆಸ್ಪತ್ರೆಯ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ನವೀನ್ ಕುಟುಂಬ ಧನ್ಯವಾದಗಳನ್ನು ತಿಳಿಸಿದ್ದಾರೆ.ಹಾಗೂ ಅಲ್ಲಿನ ನೆರೆಕರೆಯವರ ಸಹಕಾರಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ.

