ಸುಬ್ರಹ್ಮಣ್ಯದಲ್ಲಿ ಚಪಲ ಚೆನ್ನಿಗರಾಯನಿಗೆ ಚಪ್ಪಲ್ ಸೇವೆ

Pattler News

Bureau Report

ಮೊನ್ನೆ ಭಾನುವಾರ ಸುಬ್ರಹ್ಮಣ್ಯದ ಸಮೀಪ ಇರುವ ಸೈಕಲ್ ಶಾಪ್ ಒಂದಕ್ಕೆ 6 ನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ತನ್ನ ಸೈಕಲ್ ರಿಪೇರಿ ಮಾಡಲು ಬಂದಿದ್ದು. ತನ್ನ ಅಂಗಡಿಗೆ ಬಂದ ಬಾಲಕಿಯನ್ನು ಒಂದು ಮೊಟ್ಟೆಯ ಕಥೆಯ ನಾಯಕನಂತಿರುವ ಅಂಗಡಿ ಮಾಲಕ ಪುಸಲಾಯಿಸಿ ಒಳಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಸುದ್ದಿ ಬಂದಿದೆ.

ಅಜ್ಜನ ಕುಕೃತ್ಯದಿಂದ ಭಯಗೊಂಡ ಬಾಲಕಿ ಕೂಗಿಕೊಂಡು ನೇರವಾಗಿ ತನ್ನ ಮನೆಗೆ ಓಡಿಹೋಗಿ ತನ್ನ ತಾಯಿಗೆ ವಿಷಯ ಮುಟ್ಟಿಸಿದೆ. ಕೆಂಡಾಮಂಡಲ ಆದ ತಾಯಿ ಬಾಲಕಿಯನ್ನು ಕರೆದುಕೊಂಡು ಸೀದಾ ಸೈಕಲ್ ಶಾಪ್ ಗೆ ಬಂದು ಕಾಮುಕ ಚಪಲ ಚೆನ್ನಿಗರಾಯನಿಗೆ ಚಪ್ಪಲಿ ತುಂಡಾಗುವವರೆಗೆ, ಡೈನಾಮೋ ಡಿಮ್ಮಾಗುವವರೆಗೆ, ಚೈನ್ ತಪ್ಪುವವರೆಗೆ, ಹ್ಯಾಂಡಲ್ ಬೆಂಡ್ ಆಗುವವರೆಗೆ, ಟೈರ್ ಪಂಕ್ಚರ್ ಆಗುವವರೆಗೆ ಸಮಾ ಚಪ್ಪಲಿಯಿಂದ ಪೂಜೆ ಮಾಡಿದ್ದಾರೆಂದು ತಿಳಿದುಬಂದಿದೆ. ಸದ್ಯ ಚಪ್ಪಲಿ ಸೇವೆ, ಚಪ್ಪಲಿ ಭಾಗ್ಯದ ಹಸಿ ಹಸಿ ಗುರುತು ಅಜ್ಜಿಗಟ್ಟಿದ ಮುಖದಲ್ಲಿ ಇರುವುದರಿಂದ ಅಜ್ಜ ಪಂಕ್ಚರ್ ಸೈಕಲ್ ಸಮೇತ ಕಾಣೆಯಾಗಿದ್ದಾನಂತೆ.

ಸುಬ್ರಹಣ್ಯಪೋಲೀಸ್ ಠಾಣೆಯಲ್ಲಿ ಪೋಲಿಸರು ಗ್ಯಾಸ್ಟ್ರಿಕ್ ಜೋರಾಗಿ ಒಂದು ಡುರ್ರ್ ಬಿಟ್ಟರೆ ಕೇಳುವಷ್ಟೇ ದೂರದಲ್ಲಿ ಈ ಘಟನೆ ನಡೆದರೂ ಪೋಲಿಸರಿಗೆ ಮಾತ್ರ ಬಹುಶಃ ಏನೂ ಗೊತ್ತಾಗಿರ್ಲಿಕ್ಕಿಲ್ಲ. ಮರ್ಯಾದೆಗೆ ಅಂಜಿ ಯಾರೂ
ಯಾವುದೇ ದೂರು ನೀಡದಿದ್ದರೂ ಪೋಲೀಸರು ಇಂತಹ ಸಂದರ್ಭದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾಮುಕನ ಕಾಮದ ನರ ಕಟ್ ಮಾಡಲೇ ಬೇಕಾಗಿದೆ. ಖಡಕ್ ಠಾಣಾಧಿಕಾರಿ ರೆಡ್ಡಿಗಾರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top