ಗುತ್ತಿಗಾರು: ಪಜ್ಜಿ ಕಾಂಕ್ರೀಟ್ ಮೇಲೆಯೇ ಕಾರು ಬಿಟ್ಟ ಲೋಫರ್ ಮಾಸ್ಟರ್!

Pattler News

Bureau Report

ಸುಳ್ಯ ತಾಲೂಕಿನ ಗುತ್ತಿಗಾರು ಪಂಚಾಯ್ತಿ ವ್ಯಾಪ್ತಿಯ ರಸ್ತೆಯೊಂದರಲ್ಲಿ ಕಾಂಕ್ರೀಟ್ ಹಾಕಿದ ದಿನವೇ ಹಸಿ ಕಾಂಕ್ರೀಟ್ ಮೇಲೆಯೇ ಕಾರು ಚಲಾಯಿಸಿ ವಿಕೃತಿ ಮೆರೆದ ಬಗ್ಗೆ ತಿಳಿದು ಬಂದಿದೆ. ರಸ್ತೆಯಲ್ಲಿ ಟೈರ್ ಅಚ್ಚು ಕ್ಲೀನಾಗಿ ಎರಡು ಕಣಿ ಮಾಡಿದ್ದು ಹಲವು ದಶಕಗಳ ಕಾಲ ಈ ಕಲಾಕೃತಿ ಉಳಿದು ಬಿಡುತ್ತದೆ.

ಅಲ್ಲಿ ಗುತ್ತಿಗಾರು ಸಮೀಪದ ಗುತ್ತಿಗಾರು – ಬಾಕಿಲ – ಪೈಕ ರಸ್ತೆ ಕಾಂಕ್ರೀಟೀಕರಣ ಆಗಬೇಕು ಎಂಬುದು ಆ ಭಾಗದ ಜನರ ಬಹುದಿನಗಳ ಕನಸು. ಜನ ಈ ಬಗ್ಗೆ ಉಪವಾಸ ವ್ರತ ಮಾಡಿದರು,ತಪಸ್ಸು ಮಾಡಿದರು, ಒಂಟಿ ಕಾಲಲ್ಲಿ ಸುಮಾರು ಹೊತ್ತು ನಿಂತರು, ಕಂಡ ಕಂಡ ದೇವರ ಪಟಕ್ಕೆ ಹೂವ ಮುಡಿಸಿದರು, ಕಿಲಾಡಿ ಭೂತೊಲೆಗ್ ಅಗೆಲ್, ಸಂಬಿಲ ನಡೆಸಿದರು. ಆಯಿತು, ಓ ಮೊನ್ನೆ ಜೂನ್ ಹತ್ತಕ್ಕೆ ಕಾಂಕ್ರೀಟೀಕರಣ ಅಂತ ನಿಘಂಟಾಯಿತು. ಭಾಗ್ಯಕ್ಕೆ ಮತ್ತು ಚೌಟರ ನಿಧಿಯಿಂದ ಹತ್ತು ಲಕ್ಷ ಅನುದಾನ, ನೂರು ಮೀಟರ್ ಕಾಂಕ್ರೀಟೀಕರಣ.

ಓ ಮೊನ್ನೆ ಜೂನ್ ಹತ್ತಕ್ಕೆ ಶಾಸಕರ- ಸಂಸದರ ನಿಧಿಯ ಹತ್ತು ಲಕ್ಷ ತಂದು ಇದೇ ಬಾಕಿಲ – ಪೈಕ ರಸ್ತೆಗೆ ಸುರಿಯಲಾಯಿತು. ಮುಂಗಾರು ಮಳೆಯೂ ಅಪಗಪಗ ಬಂದ ಕಾರಣ ಕಾಂಕ್ರೀಟ್ ಜಾಮ್ ಟೈಟಲ್ಲಿ ಕುಂತು ಕೆಲಸ ಭಾರೀ ಚೆಂದ ಆಯ್ತು. ಜನರಿಗೆ ಖುಷಿಯೋ ಖುಷಿ. ಸಂಜೆಗೆ ಕೆಲಸ ಮುಗಿಸಿ, ಕಾಂಕ್ರೀಟ್ ರಸ್ತೆಗೆ ಪ್ಲಾಸ್ಟಿಕ್ ಹಾಕಿ, ದನ ಕರುಗಳು, ಅಧಿಕಪ್ರಸಂಗಿ ನಾಯಿಗಳು, ಪುಟಾಣಿ ಪುಚ್ಚೆಗಳು ಹಾಗೂ ಇತರೇ ಸಾಕು ಮತ್ತು ಕಾಡು ಪ್ರಾಣಿಗಳಿಗೆ ಸಂಬಂಧ ಪಟ್ಟ ಪ್ರಭೇದಗಳು ಇದರ ಮೇಲೆ ಹೋದರೆ ರಸ್ತೆ ಹಾಳಾಗುತ್ತದೆ ಎಂದು ರಸ್ತೆಗೆ ಅಡ್ಡ ಇಟ್ಟು ಗುತ್ತಿಗೆದಾರರು ಮನೆಗೆ ಹೋಗಿದ್ದರು. ಮನುಷ್ಯ ಜಾತಿ ಈ ಹಸಿ ರಸ್ತೆ ಮೇಲೆ ಹೋಗದು ಎಂಬ ನಂಬಿಕೆ ಈ ಗುತ್ತಿಗೆದಾರರದ್ದು. ಆಯ್ತು ಕತ್ತಲಾಯ್ತು, ಮಧ್ಯರಾತ್ರಿ ಮುಗಿಯಿತು, ನಸುಕಿನ ಜಾವ ಕಳೆಯಿತು, ಹಕ್ಕಿ ಎದ್ದಿತು, ಬೆಳಗಾಯಿತು. ಜನ ಬಂದು ನೋಡಿದರೆ ಕಾಂಕ್ರಿಟೀಕರಣ ಮಾಡಿದ ಅಷ್ಟೂ ನೂರು ಮೀಟರ್ ನಲ್ಲಿ ಕೋಡಿಯಿಂದ ಕೋಡಿಗೆ ಎರಡೂ ಸೈಡಲ್ಲೂ ಚಿಕ್ಕ ಕಣಿಯ ಮಾದರಿಯ ಅಚ್ಚು. ಜನರ ಪಿತ್ತ ನೆತ್ತಿಗೇರಿ ಮಂಗಳ ಗ್ರಹ ಮುಟ್ಟಿತ್ತು.

ಹಾಗೆಂದು ಪೈಕ ರಸ್ತೆಯ ಹಸಿ ಕಾಂಕ್ರೀಟ್ ಮೇಲೆ ಹೋಗಿ ರಸ್ತೆ ಹಾಳು ಮಾಡಿದ್ದು ಅತ್ತ ಸಾಕು ಪ್ರಾಣಿಯೂ ಅಲ್ಲ, ಇತ್ತ ಕಾಡುಪ್ರಾಣಿಯೂ ಅಲ್ಲ. ಮನುಷ್ಯ ಜಾತಿಯೂ ಅಲ್ಲ. ರಸ್ತೆ ಮೇಲೆ ಹರಿದು ಹೋದದ್ದು ಅತ್ತ ಪ್ರಾಣಿಯೂ ಅಲ್ಲದ, ಇತ್ತ ಮನುಷ್ಯನೂ ಅಲ್ಲದ ಒಂದು ವಾಹನ ಜಾತಿಯ ಕಾರು ಮಾರಾಯ್ರೆ. ಕಾರು ಚಲಾಯಿಸಿದ್ದು ಯಾರು, ಕಾರು ಯಾರದ್ದು ಎಂದು ಸ್ಥಳೀಯ ಅಂಗಡಿಗಳ ಸಿಸಿ ಗಳಲ್ಲಿ ಬಲಿಮ್ಮೆ ಕೇಳಲಾಗಿ ಆ ಮನೆಹಾಳ ಕೆಲಸ ಒಬ್ಬ ಲೋಫರ್ ಮಾಸ್ಟರ್ ಮಾಡಿದ್ದು ಎಂದು ಎಲ್ಲಾ ಸಿಸಿಗಳು ಒಕ್ಕೋರೊಳಿಂದ ತೋರಿಸಿವೆ.ಇವನ ಕಣ್ಣು ಏನು ಪೊಟ್ಟು ಕಟ್ಟಿದೆಯಾ ಮಾರಾಯ್ರೆ. ಕಣ್ಣು ಕಾಣಲ್ವಾ ಈ ಮಾಸ್ಟನಿಗೆ? ಲೋಫರ್ಸ್ ಬಂದು!

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top